23/12/2024
IMG-20240210-WA0009

ಬೆಳಗಾವಿ-10 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದತ್ತ ಹೆಚ್ಚಿನ ಗಮನ ನೀಡಬೇಕೆಂದು ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆನಂದ ದೇಶಪಾಂಡೆ ಅವರು ಇಂದಿಲ್ಲಿ ಹೇಳಿದರು.
ಜೈನ ಇಂಟರ್‌ನ್ಯಾಷನಲ್ ಟ್ರೆಡ ಆರ್ಗನೈಝೇಶನ ಜಿತೋ ಸಂಸ್ಥೆಯ ವತಿಯಿಂದ ಅಂಗಡಿ ಮಹಾವಿದ್ಯಾಲದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್.ಎಸ.ಎಲ್.ಸಿ. ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ವೃತ್ತಿ ಶಿಕ್ಷಣದ ಮಾರ್ಗದರ್ಶನದ 11 ನೇ ಆವೃತ್ತಿಯ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ಕಲಿಕೆಗಾಗಿ ಸಾಕಷ್ಟು ಅವಕಾಶಗಳಿವೆ. ಗೂಗಲ ಮೂಲಕ ಎಲ್ಲವನ್ನು ಕ್ಷಣಾರ್ಧದಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಇದರಿಂದ ಹೆಚ್ಚಿನ ಜ್ಞಾನಾರ್ಜನೆ ಆಗುತ್ತದೆ. ಈ ಜ್ಞಾನಾರ್ಜನೆಯೆ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಹಿನ್ನಡೆಯನ್ನುಂಟು ಮಾಡುತ್ತದೆ. ಹಾಗಾಗಿ ಅನುಭವಸ್ಥರು ಮತ್ತು ನಿರಂತರ ಕಲಿಕೆಯ ಮೂಲಕ ನಿರ್ಧಿಷ್ಟವಾದ ಶೀಕ್ಷಣವನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ಅವರು ಹೇಳಿದರು.
ಗಣಿತ ಶಾಸ್ತçದಲ್ಲಿ ಇಡಿ ವಿಶ್ವಕ್ಕೆ ಶೂನ್ಯವನ್ನು ಪರಿಚಯಿಸಿದ್ದು ಭಾರತ ದೇಶ. ಆದರೆ ಇದು ಭಾರತದಲ್ಲಿಯೇ ಬೇರೆ ದೇಶಗಳ ಗಣಿತವನ್ನು ಕಲಿಯಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳು ಇರಬೇಕು. ಇದರಿಂದ ಹೆಚ್ಚಿನ ಕಲಿಕೆಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ನಾಗರಿಕ ಸೇವೆಗಳ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಅವರು ಭಾರತೀಯ ನಾಗರಿಕ ಸೇವೆ ಇದೊಂದು ಅತ್ಯುನ್ನತ ಸೇವೆಯಾಗಿದೆ. ಜಿಲ್ಲಾಧಿಕಾರಿ,ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಸೇರಿದಂತೆ ಇನ್ನೂ ಹತ್ತು ಹಲವಾರು ಹುದ್ದೇಗಳನ್ನು ಅಲಂಕರಿಸಲು ವಿಪುಲ ಅವಕಾಶಗಳಿವೆ. ಈ ಅವಕಾಶವನ್ನು ಗಿಟ್ಟಿಸಿಕೊಳ್ಳಲು ನಿಮ್ಮಲ್ಲಿ ಮನೋಸ್ಥೆöÊರ್ಯ ಗಟ್ಟಿಯಾಗಿರಬೇಕು. ನಿರ್ಧಿಷ್ಟ ಗುರಿಯನ್ನು ತಲುಪುವ ಛಲ ಇರಬೇಕು. ನಿರಂತರ ಅಧ್ಯಯನ ಮತ್ತು ಪ್ರತಿದಿನ ಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಮುನ್ನಡೆಯುತೇನೆಂಬ ಎದೆಗಾರಿಕೆ ಇರಬೇಕು. ನನಗೇನು ಬರುವುದಿಲ್ಲ ಎಂದು ಹೆದರಿಕೆಯನ್ನು ಮನಸ್ಸಿನಿಂದ ತೆಗೆದು ಹಾಕಿ ಗಟ್ಟಿ ನಿರ್ಧಾರದಿಂದ ಮುನ್ನಡೆದರೆ ಯಶಸ್ಸು ಖಂಡಿತ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ವೀಣಾ ದೇಸಾಯಿ ಕರ್ಚಿ , ಅಂಜಲಿ ಪಂಡಿತ, ಹಗೂ ತೇಜಸ ಕೋಳೆಕರ ಅವರು ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ಮಾಡಿದರು. ಸಮಾರಂಭದಲ್ಲಿ ಜಿತೋ ಚೇರಮನ್ ವೀರಧವಲ ಉಪಾಧ್ಯೆ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ರೌಣಕ ಶೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಶೋಕ ಕಠಾರಿಯಾ ವಂದಿಸಿದರು. ಅಂಕಿತ ಖೋಡಾ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 400 ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಹೇಂದ್ರ ಪರಮಾರ ಸೇರಿದಂತೆ ಜಿತೊ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!