01/04/2026
IMG-20260401-WA0000

ಬೆಳಗಾವಿ-01 : ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿಯ ನಿಮಿತ್ತ 2026ನೇ ವರ್ಷದಲ್ಲಿ ಭವ್ಯೋತ್ಸವವನ್ನು ಆಚರಿಸುವ ನಿರ್ಧಾರವನ್ನು ಬೆಳಗಾವಿಯಲ್ಲಿ ಕೈಗೊಳ್ಳಲಾಗಿದೆ. ಈ ಸಂಬಂಧ ನಡೆದ ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಏಕಮತದಿಂದ ಆಯ್ಕೆ ಮಾಡಲಾಗಿದೆ.

ನಗರದಲ್ಲಿ ನಡೆದ ವಿವಿಧ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು, ಜಯಂತಿೋತ್ಸವ ಸಮಿತಿ ಸದಸ್ಯರು ಮತ್ತು ದಲಿತ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಈ ಮಹತ್ವದ ಸಭೆ ನಡೆಯಿತು. ಈ ಸಂದರ್ಭದಲ್ಲಿ 2026ನೇ ವರ್ಷವು ಸಾಮಾಜಿಕ ಚಳವಳಿಗಳ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಈ ವರ್ಷ ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜಯಂತಿ, ಸಂತ ಗಾಡ್ಗೆ ಮಹಾರಾಜ ಅವರ 150ನೇ ಜಯಂತಿ, ಮಹಾಡ್ ಚವ್ದಾರ್ ತಳಾವ್ ಸತ್ಯಾಗ್ರಹದ 100ನೇ ವರ್ಷ, ಹಾಗು ಸಮತಾ ಸೈನಿಕ್ ದಳದ ಸ್ಥಾಪನೆಯ 100 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಸಮಾಜ ಜಾಗೃತಿಗಾಗಿ ವರ್ಷಪೂರ್ತಿ ಗ್ರಾಮಗ್ರಾಮಗಳಲ್ಲಿ ‘ಮನೆಮನೆಗೆ ಸಂವಿಧಾನ’ ಮತ್ತು ‘ಮನೆಮನೆಗೆ ಅಂಬೇಡ್ಕರ್’ ಎಂಬ ಪರಿಕಲ್ಪನೆಗಳ ಆಧಾರದಲ್ಲಿ ಚರ್ಚಾಸತ್ರಗಳನ್ನು ಆಯೋಜಿಸಲಾಗುವುದು. ಇದರ ಜೊತೆಗೆ ಯುವಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ವಿವಿಧ ಸಾಮಾಜಿಕ, ಶೈಕ್ಷಣಿಕ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ನಿರುದ್ಯೋಗಿ ಯುವಕರಿಗೆ ಉದ್ಯೋಗ ಮಾರ್ಗದರ್ಶನ, ಯಶಸ್ವಿ ಉದ್ಯಮಿಗಳಿಗೆ ಸನ್ಮಾನ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ, ಮಹಿಳೆಯರಿಗೆ ಉದ್ಯಮ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುವುದು ಮುಂತಾದ ಹಲವು ಕಾರ್ಯಕ್ರಮಗಳು ಒಳಗೊಂಡಿವೆ. ಜೊತೆಗೆ ಅನುಭವೀ ನಾಯಕರು ನೀಡುವ ಮಾರ್ಗದರ್ಶನವನ್ನು ಹೊಸ ತಲೆಮಾರಿಗೆ ತಲುಪಿಸುವುದಕ್ಕೂ ಒತ್ತು ನೀಡಲಾಗುತ್ತದೆ.

ಹಾಗೂ 2027ರಲ್ಲಿ ರಾಷ್ಟ್ರೀಯ ಏಕತಾ ಪರಿಷತ್, ಸಾಹಿತ್ಯ ಸಮ್ಮೇಳನ, ಸಾಂಸ್ಕೃತಿಕ ಉತ್ಸವ, ಕ್ರೀಡಾ ಮಹೋತ್ಸವ ಹಾಗೂ ಸಂಪೂರ್ಣ ಜಿಲ್ಲೆಯಲ್ಲಿ ಭೀಮರಥ ಸಂವಿಧಾನ ಶುಭಯಾತ್ರೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಏಕಮತದಿಂದ ಆಯ್ಕೆ ಮಾಡಲಾಗಿದೆ. ಮಲ್ಲೇಶ ಚೌಗುಲೆ ಅವರನ್ನು ಅಧ್ಯಕ್ಷರಾಗಿ, ರಾಜು ಕಲ್ಲೇಕಣ್ಣವರ, ಸಂತೋಷ ಕಾಂಬಳೆ ಮತ್ತು ಮನೋಜ್ ಹಿತಲಮಣಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಆಕಾಶ ಹಲ್ಗೇಕರ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಆನಂದ ಕೊಳ್ಕರ್ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಹಾಗೂ ಭೀಮ್ ಜ್ಯೋತಿ ಸಮಿತಿ (ಸಮತಾ ಸೈನಿಕ್ ದಳ)
ಯಲ್ಲಪ್ಪ ಗಾಡಿನಾಯಕ, ದೀಪಕ್ ಮೈತ್ರಿ, ಯಶವಂತ ಕಾಂಬಳೆ.

ಕಾರ್ಯಕ್ರಮ ಆಯೋಜನಾ ಸಮಿತಿ
ಸುದೀರ್ ಚೌಗುಲೆ, ಜೀವನ ಕುರಣೆ, ಸುನಿಲ್ ಬಸ್ತವಾಡಕರ, ವಿನೋದ ಸೊಲಾಪೂರೆ, ಮಹೇಶ್ ಕುಲ್ಕಾರ, ದಯಾನಂದ ಬಸ್ತವಾಡಕರ, ಪ್ರಕಾಶ ಚಂಪಣ್ಣವರ, ಸಿದ್ರಾಯ ಚೌಗುಲೆ, ರಾಜಶೇಖರ ಹಿಂದಳಗಿ, ಪ್ರಮೋದ ಬುಕ್ಕ್ಯಾಳಕರ, ರಘು ಚಲವಾದಿ, ಮಿಲಿಂದ ಸೋಳಗೆಕರ, ಮಹಾದೇವ ತಳವಾರ, ಸುಬ್ರಹ್ಮಣ್ಯಂ (ಸುಬು) ಕಾಂಬಳೆ, ಸಂದೀಪ್ ಕೊಳ್ಕರ್.

ಜಯ ಸಂವಿಧಾನ ಮತ್ತು ಜಯ ಭೀಮ್ ರ್ಯಾಲಿ ಸಮಿತಿ
ಶ್ರೀನಿವಾಸ ತಳವಾರ, ಬಸವರಾಜ್ ಆವರೋಳಿ, ಮೋಹನ್ ಕಾಂಬಳೆ, ಸುರೇಶ್ ರಜಕಣ್ಣವರ, ಗಜನನ ಸೋಳಗೆಕರ, ಸುನಿಲ್ ಪಿರಗಾನೆ, ಸಂತೋಷ ಹಲ್ಗೇಕರ್, ಮಹೇಶ್ ಶಿಗಿಹಳ್ಳಿ, ಯುವರಾಜ್ ತಳವಾರ, ಪ್ರಶಾಂತ್ ಪೂಜಾರಿ, ಆಕಾಶ್ ಬೆವಿನಕಟ್ಟಿ, ಸಂತೋಷ ಹೊಂಗಲ್, ದಯಾನಂದ ಬಸ್ತವಾಡಕರ, ಮಿಲಿಂದ ಐವಳೆ, ರವಿ ಬಸ್ತವಾಡಕರ, ಗುಂಡು ತಳವಾರ, ಅಡ್ವೊಕೇಟ್ ರಾಹುಲ್ ಲಕ್ಕೋಲಿ, ಅಡ್ವೊಕೇಟ್ ವಿಶಾಲ್ ಚೌಗುಲೆ, ಕಲ್ಲಪ್ಪ ರಾಮಚಣ್ಣವರ, ಯಾದವ್ ಕಾಂಬಳೆ, ಕಸ್ತೂರಿ ಕೊಳ್ಕರ್, ಲಕ್ಷ್ಮಣ ಕೊಳ್ಕರ್, ಸಂತೋಷ ಕಾಂಬಳೆ, ಸಾಗರ್ ಕೊಳ್ಕರ್, ನಿಂಗಪ್ಪ ಕಾಂಬಳೆ, ಅಶೋಕ್ ಕಾಂಬಳೆ, ದೀಪಕ್ ದಾಭಾಡೆ.

ಸಲಹಾ ಸಮಿತಿ
ಕಲಪ್ಪ ಕಾಂಬಳೆ, ಸಿದ್ಧಪ್ಪ ಕಾಂಬಳೆ, ಮಲ್ಲೇಶ ಕುರಂಗಿ, ರಾಮ ಚವ್ಹಾಣ, ಗಿರಿಯಪ್ಪ ಕೊಳ್ಕರ್, ಬಸವರಾಜ್ ರಾಯವಗೋಳ, ಮನೋಹರ್ ಮುಚಂಡಿ, ಮಹಾದೇವ ಮ್ಯಾಗೀನಮಣಿ, ಸಿದ್ರಾಯಿ ಮೈತ್ರಿ, ಲಕ್ಷ್ಮಣ ಛತ್ರಣ್ಣವರ, ಯಲ್ಲಪ್ಪ ಕೊಳ್ಕರ್, ಸುರೇಶ್ ಗವಣ್ಣವರ, ಭಾವಕಣ್ಣ ಭಂಗ್ಯಾಬೋಳ, ರಾಜಶೇಖರ ತಳವಾರ, ದೀಪಕ್ ವಾಘೇಲಾ, ವಿಜಯ ನಿರಗಟ್ಟಿ, ರವಿ ಮೈತ್ರಿ, ಯಲ್ಲಪ್ಪ ತಳವಾರ, ಮೋಹನ್ ಕಾಂಬಳೆ ಆಂಬಿ, ಸಂದೀಪ್ ಖನಗಾವಕರ, ಮಲ್ಲಪ್ಪ ತಳವಾರ, ಪರಶುರಾಮ್ ವಂಟಮೂರಿ, ವಿನೋದ್ ಮ್ಯಾಗೀನಮಣಿ, ಭೈರು ಕಾಂಬಳೆ, ಪರಶುರಾಮ್ ಕಾಂಬಳೆ ಇವರನ್ನು ಆಯ್ಕೆ ಮಾಡಲಾಗಿದೆ.

ಹಾಗೂ ವಿವಿಧ ಸಮಿತಿಗಳಲ್ಲಿ ಅನೇಕ ಕಾರ್ಯಕರ್ತರನ್ನು ಆಯ್ಕೆ ಮಾಡಿ, ಉತ್ಸವವನ್ನು ಯಶಸ್ವಿಯಾಗಿ ನಡೆಸಲು ವ್ಯಾಪಕ ಯೋಜನೆ ರೂಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!