29/01/2026
IMG-20251226-WA0026

ಬೆಳಗಾವಿ-26: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಅಲ್ಲಿನ ಮೂಲಭೂತವಾದಿಗಳನ್ನು ಹಿಡಿದು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ‌

ನಗರದಲ್ಲಿ ಸಾವಿರಾರು ಜನಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ ಬಾಂಗ್ಲಾದೇಶದ ಮೂಲಭೂತವಾದಿಗಳ ವಿರುದ್ಧ ಘೋಷಣೆ ಕೂಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ವಿರುದ್ದ ಘೋಷಣೆ ಕೂಗಿ ಅಲ್ಲಿನ ಧ್ವಜಗಳನ್ನು ಸುಟ್ಟು ಆಕ್ರೋಶ್ ವ್ಯಕ್ತಪಡಿಸಿದರು. ‌

ಮಾನವ ಸರಪಳಿ ನಿರ್ಮಿಸಿ ಸಂಭಾಜಿ ವೃತ್ತವನ್ನು ಸಂಪೂರ್ಣವಾಗಿ ಬಂದ್ ಮಾಡಿ ಉಗ್ರ ಪ್ರತಿಭಟನೆಯಲ್ಲಿ ಕೊಲೆಗಡಕರ ವಿರುದ್ದ ಆಕ್ರೋಶ್ ವ್ಯಕ್ತಪಡಿಸಿದರು.
ನಗರದಲ್ಲಿ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ ಯಾಗಿಗೊಂಡಿತ್ತು, ಅಖಂಡ ಹಿಂದೂ ರಾಷ್ಟ್ರವನ್ನು ಇಂತಹ ಕೊಲೆ ಕೃತ್ಯಗಳಿಂದ ಬೆದರಿಸಲು ಸಾಧ್ಯವಿಲ್ಲ. ಅಲ್ಲಿನ ಅಲ್ಪಸಂಖ್ಯಾತರನ್ನು ರಕ್ಷಿಸುವ ಕೆಲಸ ಕೇಂದ್ರ ಸರಕಾರ ಮಾಡಬೇಕು. ಬಾಂಗ್ಲಾದೇಶದ ಮೇಲೆ ಆರ್ಥಿಕ ಹಾಗೂ ವ್ಯಾಪಾರ ದಿಗ್ಭಂಧನ ಹಾಕಬೇಕು ಎಂದು ಒತ್ತಾಯಿಸಿದರು.

 

error: Content is protected !!