30/01/2026
IMG-20251127-WA0001

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೌಲ್ಯಗಳು ನೈತಿಕತೆಯ ಗುಣಗಳು ದೂರವಾಗುತ್ತಿರುವ ಸಂದರ್ಭದಲ್ಲಿ ವಚನಗಳಲ್ಲಿ ಅಡಗಿರುವ ಸತ್ಯ ಮತ್ತು ನೈತಿಕತೆಯ ಗುಣಗಳನ್ನು ತಿಳಿಯಲು ಶಾಲಾ ಹಂತದಲ್ಲಿ ಶರಣರ ವಚನಗಳಲ್ಲಿಯ ನೈತಿಕತೆಯ ಪಾಠ ತಿಳಿಯಪಡಿಸಬೇಕಾದ ಅಗತ್ಯತೆ ಇದೆ ಎಂದು ಗಂದಿಗವಾಡದ ರಾಜಗುರು ಸಂಸ್ಥಾನಮಠದ ಮೃತ್ಯುಂಜಯಸ್ವಾಮಿ ಹಿರೇಮಠರವರು ರವಿವಾರ ದಿ. 23ರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತಿ ಡಾ. ಸುನಿಲ್ ಪರಿಟ್ ರವರು ರಚಿಸಿದ ‘ಮಕ್ಕಳ ನೈತಿಕ ವಚನಗಳು’ ಮತ್ತು ‘ ನಮ್ಮ ಕರುನಾಡು’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಪರಿಚಯಿಸಿದರು. ಮಕ್ಕಳ ಬೌದ್ಧಿಕತೆಯ ವೃದ್ಧಿಗೆ ಅನುಕೂಲಕರವಾಗುವ ಸರಳ ವಚನಗಳನ್ನು ವಿಶ್ಲೇಷಿಸಿ ಅವುಗಳಲ್ಲಿರುವ ಮೌಲ್ಯಗಳನ್ನು ಮಕ್ಕಳಿಗೆ ತಿಳಿಯಪಡಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ್ದ ಸಾಹಿತಿ ಬಿ.ಕೆ ಮಲಾಬಾದಿ ನಾಡು ನುಡಿಯ ಬಗ್ಗೆ ಮತ್ತು ಮಕ್ಕಳ ಕುರಿತಾದ ಕೃತಿಗಳು ರಚಿಸಿದ ಪರಿಟ್ ರವರ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು ಸಾಹಿತಿ ಡಾ ರೇಣುಕಾ ಕಠಾರಿ ‘ನಮ್ಮ ಕರುನಾಡು’ ಕೃತಿ ಪರಿಚಯಿಸಿದರು.

ವಚನ ಪುಸ್ತಕ ಎಲ್ಲ ಶಾಲೆಯವರು ತೆಗೆದುಕೊಳ್ಳಲು ಅನುಮತಿನಿಡಬೇಕು ಶಾಲಾಮಕ್ಕಳಿಗೆ ಉಪಯುಕ್ತವಾಗಿದೆ ಎಂದು ಎಂ ವೈ ಮೆಣಸಿನಕಾಯಿಯವರು ತಿಳಿಸಿದರು. ಕೃತಿಯ ಲೇಖಕ ಡಾ ಸುನಿಲ ಪರೀಟ ಮಾತನಾಡಿ ಎಲ್ಲರ ಪ್ರೇರಣೆಯಿಂದ ಇತ್ತೀಚಿನ ದಿನಗಳಲ್ಲಿ ರೈತ, ಸೈನಿಕ ಮತ್ತು ಮಕ್ಕಳ ಕೃತಿಗಳನ್ನು ರಚಿಸಿರುವೆ ಮುಂಬರುವ ದಿನಗಳಲ್ಲಿ ಮಕ್ಕಳೇ ಬರೆದಿರುವ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಯೋಜನೆ ಇದೆ ಎಂದರು. ಎರಡು ಕೃತಿಗಳ ಪ್ರಕಾಶಕರು ಮತ್ತು ಬೆಳಗಾವಿಯಲ್ಲಿ ಕನ್ನಡ ಪುಸ್ತಕಗಳು ಬರುವಲ್ಲಿ ತನು ಮನ ಧನದಿಂದ ಸೇವೆ ಮಾಡಿ ಕವಿಗಳಿಗೆ ಲೇಖಕರಿಗೆ ಉತ್ತೇಜನ ಮಾಡುತ್ತಿರುವ ಶಿವಾ ಆಪ್ ಸೆಟ್ ಮತ್ತು ಪ್ರಿಂಟರ್ಸ್ ಮಾಲೀಕರಾದ ಡಾ. ಶಿವು ನಂದಗಾವ್ ಮತ್ತು ಬಸು ನಂದಗಾವ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಳಗಾವಿ ಕ.ಸಾ.ಪ ಜಿಲ್ಲಾ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ತಾಲೂಕು ಅಧ್ಯಕ್ಷ ಸುರೇಶ್ ಹಂಜಿ ಬರಹಗಾರರ ಸಂಘದ ಅಧ್ಯಕ್ಷ ಸುರೇಶ ಸಕ್ರೆಣ್ಣವರ,ರಜನಿ ಜೀರಗ್ಯಾಳ, ದಯಾನಂದ ಚಿಕ್ಕಮಠ ಆರ್ ಬಿ ಬನಶಂಕರಿ,ಜಯಶೀಲಾ ಬ್ಯಾಕೋಡ, ಡಾ. ಹೇಮಾವತಿ ಸೋನೋಳ್ಳಿ, ,ನಿರ್ಮಲಾ ಪಾಟೀಲ, ವಿಜಯ್ ಕಿಳ್ಳಿಕೇತರ, ಬಿ ಬಿ ಮಠಪತಿ, ಅನುರಾಧಾ ಕೋಲಕಾರ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಡಾ. ಸುನಿಲ್ ಪರೀಟ್ ಸ್ವಾಗತಿಸಿದರು. ಶಿವಾನಂದ ತಲ್ಲೂರ ನಿರೂಪಿಸಿದರು ಸುಮನ್ ಪರೀಟ್ ವಂದಿಸಿದರು

error: Content is protected !!