ಬೆಳಗಾವಿ-23: ಜನಪರ ಸೇವೆ ಮಾಡುತ್ತಿರುವ ಸರ್ವಲೋಕಾ ಸೇವಾ ಫೌಂಡೇಶನ್ ಸೇವೆಯನ್ನು ಪರಿಗಣಿಸಿ ಬೆಲ್ ಸಿಟಿ ಡೈಗ್ನೊಸ್ಟಿಸ್ಟಿಕ್ ಸೆಂಟರ್ ನವರು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಬಸಯ್ಯ ಹಿರೇಮಠ ಅವರಿಗೆ ಸುಸಜ್ಜಿತವಾದ ಅಂಬ್ಯುಲೆನ್ಸ್ ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಬಸಯ್ಯ ಹಿರೇಮಠ, ಬೆಲ್ ಸಿಟಿ ಡೈಗ್ನೊಸ್ಟಿಸ್ಟಿಕ್ ಸೆಂಟರ್ ನವರು ಅಂಬ್ಯುಲೆನ್ಸ್ ಕೊಡುಗೆ ನೀಡಿದ್ದು, ನಮಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಇವರು ಕೊಟ್ಟಿರುವ ಈ ವಾಹನದಲ್ಲಿ ಶಕ್ತಿ ಮೀರಿ ಮತ್ತಷ್ಟು ಬಡವರ ಸೇವೆ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಬೆಲ್ ಸಿಟಿ ಡೈಗ್ನೊಸ್ಟಿಸ್ಟಿಕ್ ಸೆಂಟರ್ ನ ಸಮಸ್ತ ಸಂಚಾಲಕ, ಆಡಳಿತ ಮಂಡಳಿ, ನೀಲಕಂಠಯ್ಯ ಹಿರೇಮಠ ಶಾಸ್ತ್ರೀಯವರು, ಶರದಚಂದ್ರ ಶಾಸ್ತ್ರೀಯವರು, ಬಾವುಸಾಬ್ ಅತ್ತಾರ, ಪ್ರವೀಣ್ ಹಿರೇಮಠ, ನಾಗಯ್ಯ ಪೂಜಾರ,ಆನಂದ ಭಾತ್ಕಂಡೆ, ಗೌರಿಶ್ ಹಿರೇಮಠ ಸೇರಿದಂತೆ ಹಲವಾರು ಹಾಜರಿದ್ದರು.
