ಬೆಳಗಾವಿ-24: ನಗರದ ಪ್ರಮುಖ ಹಿರಿಯರು ಸಾಮಾಜಿಕ ಚಿಂತಕರು ಆದ ಸುಧಾಕರ ಶಾನಭಾಗ ಅವರ ಅಗಲಿಕೆಗೆ ಗಣ್ಯರು ಹಾಗೂ ಬೆಳಗಾವಿ ಶಿಕ್ಷಣ ಸಂಸ್ಥೆಯ ಪಧಾಧಿಕಾರಿಗಳು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಂಬನಿ ಮಿಡಿದು, ಶೃದ್ಧಾಂಜಲಿ ಸಮರ್ಪಣೆ ಮಾಡಿದ್ದಾರೆ..
ಬೆಳಗಾವಿ ಶಿಕ್ಷಣ ಸಂಸ್ಥೆಯ ಪ್ರಸಕ್ತ ಅಧ್ಯಕ್ಷರಾದ ಅವಿನಾಶ ಪೋತದಾರ, ಉಪಾಧ್ಯಕ್ಷರಾದ ಸುಧೀರ ಕುಲಕರ್ಣಿ, ಗೌರವ ಕಾರ್ಯದರ್ಶಿಗಳಾದ ಶ್ರೀನಿವಾಸ ಶಿವಣಗಿ, ದೀಪಕ ಕುಲಕರ್ಣಿ, ಅರವಿಂದ ಹುನಗುಂದ ಹಾಗೂ ಎನ್ ಎಸ್ ಪೈ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯರಾದ ರಾಧಿಕಾ ನಾಯಿಕ ಹಾಗೂ ಸಂಸ್ಥೆಯ ಎಲ್ಲ ಶಾಲೆ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿವರ್ಗ, ಅನೇಕ ಮಾಜಿ ವಿದ್ಯಾರ್ಥಿಗಳು, ಎಲ್ಲ ಮಕ್ಕಳು ಸೇರಿಕೊಂಡು ಹಿರಿಯರು ಹಾಗೂ ಮಾರ್ಗದರ್ಶಕರು ಆದ “ಸುಧಾಕರ ಶಾನಭಾಗ” ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದು,
ನಿಜಕ್ಕೂ ಸ್ಮರಿಸಿ ನಮಿಸಬೇಕಾದ ತುಂಬು ವ್ಯಕ್ತಿತ್ವಕ್ಕೆ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಮರ್ಪಿಸಿದ್ದಾರೆ.
