11/12/2025
IMG-20250917-WA0012

ಪ್ರತಿಭೆಗಳನ್ನು ಗುರುತಿಸುವಲ್ಲಿ ನಂ.1 ಚಾನೆಲ್ ಆದ ಜೀ಼ಕನ್ನಡ ವಾಹಿನಿ ಈಗ ಮತ್ತೊಮ್ಮೆ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡುತ್ತಿದೆ.ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಆಡಿಷನ್ 31 ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ನೀವು ಮುಂದಿನ ಡ್ಯಾನ್ಸಿಂಗ್ ಅಥವಾ ಕಾಮಿಡಿ ಕಿಂಗ್ ಆಗಬೇಕು ಅಂದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ.

ಪ್ರತಿಭೆ ಇದ್ದರೂ ಅವಕಾಶ ಸಿಗದೇ ಇರುವವವರಿಗೆ ಜೀ಼ಕನ್ನಡ ಒಂದು ಅತ್ಯತ್ತಮ ವೇದಿಕೆ ಕಲ್ಪಿಸಿಕೊಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಭಾಗವಹಿಸುವವರ ವಯೋಮಿತಿ 6 ರಿಂದ 60 ರವರೆಗೆ ಇರಬೇಕು ಮತ್ತು ನೀವು ಉತ್ತಮವಾಗಿ ಡ್ಯಾನ್ಸ್ ಮಾಡುವವರಾಗಿರಬೇಕು. ಇನ್ನು, ಕಾಮಿಡಿ ಕಿಲಾಡಿಗಳಲ್ಲಿ ಭಾಗವಹಿಸುವುದಾದರೆ ನಿಮ್ಮ ವಯಸ್ಸು 16 ರಿಂದ 60 ವರುಷದ ಒಳಗಿರಬೇಕು ಮತ್ತು ನಿಮ್ಮದೇ ಕಾಮಿಡಿ ಸ್ಕಿಟ್ ಇರಬೇಕು.ರೀಲ್ಸ್ ವಿಡಿಯೋಗಳಿಗೆ ಅವಕಾಶವಿಲ್ಲ,ದಿನಾಂಕ 20 ಸೆಪ್ಟೆಂಬರ್ 2025 ಶನಿವಾರ ಬೆಳಗ್ಗೆ 9 ಗಂಟೆಗೆ,ಸಂಗಮೇಶ್ ಆಂಗ್ಲ ಮಾಧ್ಯಮ ಪ್ರೌಢಶಾಲೆ,ಪ್ಲಾಟ್ ಸಂಖ್ಯೆ 3 ಮತ್ತು 4,ಆಟೋನಗರ,ಬೆಳಗಾವಿ.ಇಲ್ಲಿ ಆಡಿಷನ್ ನಡೆಯಲಿದ್ದು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಪಾಸ್ಪೋರ್ಟ್ ಸೈಜ್ ಪೋಟೋ ಹಾಗು ಅಡ್ರೆಸ್ ಪ್ರೂಪ್ ಜೆರಾಕ್ಸ್ ಜೊತೆಗೆ ಬನ್ನಿ,ಜೀಕನ್ನಡ ವಾಹಿನಿಯಲ್ಲಿ ಆಡಿಷನ್ ಗಳಿಗೆ ಯಾವುದೇ ಶುಲ್ಕ ಕಟ್ಟುವಂತಿಲ್ಲ,ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾಹಿನಿಯು ತಿಳಿಸಿದೆ.

error: Content is protected !!