ಕೌಜಲಗಿ-09: ಕೃಷ್ಣನು ಪಾಂಡವರಿಗೆ ಸಂಬಂಧಿಯಷ್ಟೇ ಅಲ್ಲದೆ ಗುರು ಆಗಿದ್ದನು. ಅವನು ವಿಶ್ವಗುರುವಾಗಿ ಧರ್ಮ ಸಂಸ್ಥಾಪಕನಾದನೆಂದು ನಿವೃತ್ತ ಕನ್ನಡ ಅಧ್ಯಾಪಕ ಬಳವಂತರಾವ ಮುತಾಲಿಕ ದೇಸಾಯಿ ಹೇಳಿದರು.
ಕೌಜಲಗಿ ಪಟ್ಟಣದಲ್ಲಿ ಶನಿವಾರ ಸರ್ಕಾರಿ ಪ್ರಾಥಮಿಕ ಮತ್ತು ಅಂಬರೀಶ ವರ್ಮ ದೇಸಾಯಿ ಪ್ರೌಢಶಾಲೆಯ 1988-1998ನೇ ಶೈಕ್ಷಣಿಕ ಸಾಲಿನ ಹಳೆ ವಿದ್ಯಾರ್ಥಿಗಳ ಗುರುವಂದನೆ ಮತ್ತು ಸ್ನೇಹ ಸಮ್ಮೇಳನದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, ರನ್ನ ಕವಿಯ ನೀರೊಳಗಿರ್ದುಂಬೆಮರ್ತ ನುರಗಪತಾಕಂ ಸನ್ನಿವೇಶವನ್ನು ಉಲ್ಲೇಖಿಸಿ, ಪಾಂಡವರಿಗೆ ಕೃಷ್ಣ ಗುರುವಾದಂತೆ ಕೌರವರಿಗೆ ಶಕುನಿ ಗುರುವಾಗಿ ಕಾಣಲಿಲ್ಲ. ಅದಕ್ಕಾಗಿ ಗುರುಬಲವಿಲ್ಲದೆ ಕೌರವರು ಸೋತರೆಂದು, ವಿಶ್ವಕ್ಕೆ ಗುರು ಶ್ರೇಷ್ಠನೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಆಯೋಜಕರಾದ ತಮ್ಮಣ್ಣ ಸಣ್ಣಪ್ಪನವರ, ಅಸ್ಲಂ ಮುಲ್ತಾನಿ, ಅನಂತ ಕಾಳೆ, ದೇವೇಂದ್ರ ಹೊಸಪೇಟೆ, ಪ್ರಭು ಲೋಕನ್ನವರ,ರಾಜು ಮುಲ್ತಾನಿ,ರೇಣುಕಾ ಡೊಂಬರ,ರತಿದೇವಿ ಮುತಾಲಿಕ್ ದೇಸಾಯಿ, ಶೈಲಾ ಬಡಿಗೇರ, ಯಾಸ್ಮಿನ್ ಖಾನ, ನಿರ್ಮಲ ಪೂಜೇರಿ ಸೇರಿದಂತೆ ಹಳೆ ವಿದ್ಯಾರ್ಥಿಗಳು ಅಗಲಿದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಗುರುವಿನ ಮಹತ್ವವನ್ನು ಕುರಿತು ನಿವೃತ್ತ ಶಿಕ್ಷಕರಾದ ಜಿ. ಜಿ. ಮುತಾಲಿಕ ದೇಸಾಯಿ, ರಾಮನಗೌಡ ಪಾಟೀಲ ಮಾತನಾಡಿದರು.
ಅಧ್ಯಕ್ಷತೆಯನ್ನು ಅಂಬರೀಶರ್ಮ ದೇಸಾಯಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕರಿಬಸಪ್ಪ.ಪಿ ಮತ್ತು ದಿವ್ಯ ಸಾನಿಧ್ಯವನ್ನು ಕೌಜಲಗಿ ಮರುಳಸಿದ್ದೇಶ್ವರ ಸಿದ್ಧ ಸಂಸ್ಥಾನ ಮಠದ ಕೃಪಾನಂದ ಮಹಾಸ್ವಾಮಿಗಳು ವಹಿಸಿದ್ದರು.
ನಿವೃತ್ತ ಶಿಕ್ಷಕರಾದ ಎಸ್ ಬಿ ಗಾಣಿಗೇರ, ಎಂ.ಎಂ.ಭಜಂತ್ರಿ, ಎಸ್ ಎಸ್ ಅಮ್ಮಣಗಿ, ಡಿ ಎಚ್ ಭಜಂತ್ರಿ, ಎಂ ಎಸ್ ಸಿದ್ದಾಪುರ, ಡಿ. ಎಚ್. ಪಿರಜಾದೆ, ಅನ್ನಪೂರ್ಣ ಕೌಜಲಗಿ, ಶಶಿಕಲಾ ಭೋವಿ, ಎಂ ಎಸ್ ಸೌದಾಗರ, ಎಸ್ಎಂ ನದಾಫ್, ಆರ್ ಕೆ ಪಾಟೀಲ, ಶುಭಾಷ ಹಿರೇಮೇತ್ರಿ, ಚಂದ್ರಶೇಖರ್ ಭಜಂತ್ರಿ ಹಾಗೂ ಕಚೇರಿ ಸಿಬ್ಬಂದಿಗಳಾದ ಶಿವಪ್ಪ ತೋಳನ್ನವರ, ಭೋವಿ, ಕೆ ಪಿ ಭಜಂತ್ರಿ ಮತ್ತು ಸಾರಿಗೆ ನಿಯಂತ್ರಿಕ ಎ ಬಿ ಜಮಾದಾರ ಇವರನ್ನು ಸತ್ಕರಿಸಿ ಗೌರವಿಸಲಾಯಿತು.
ಹಳೆ ವಿದ್ಯಾರ್ಥಿಗಳ ಪರವಾಗಿ ಸಂಗಮೇಶ ಭೋಜ, ಅಶೋಕ ಕುಂದರಗಿ, ಸುರೇಶ ಭಜಂತ್ರಿ ಅನಿಸಿಕೆಗಳನ್ನು ಹೇಳಿದರು.
ನಾಡಗೀತೆ ಮತ್ತು ರಾಷ್ಟ್ರಗೀತೆಯೊಂದಿಗೆ ಪ್ರೌಢಶಾಲಾ ಆವರಣದಲ್ಲಿ ಗುರುವಂದನ ಕಾರ್ಯಕ್ರಮ ಆರಂಭವಾಯಿತು.
ಹಳೆ ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ಸ್ವಾಗತಗೀತೆ ಹಾಡಿದರು. ಬಸು ಯಲಿಗಾರ ಸ್ವಾಗತಿಸಿದರು. ಮಹಾಂತೇಶ ಕುಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ಕಾಕಡೆ ನಿರೂಪಿಸಿದರು. ರವೀಂದ್ರ ಕೌಜಲಗಿ ವಂದಿಸಿದರು.
