11/12/2025

ಬೆಳಗಾವಿ-24: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ‌ಸಮೂಹ‌ ಸಂವಹನದ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ.

ನಿಗದಿತ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 7 ಕೊನೆಯ ದಿನಾಂಕವಾಗಿದ್ದು, ಸೆಪ್ಟೆಂಬರ್ 9 ರಂದು 12:15 ರಿಂದ 1:30ರ ವರೆಗೆ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವೇಶ ಪರೀಕ್ಷೆ ಜರುಗಲಿದೆ.

ಪ್ರಸ್ತುತ ವಿಭಾಗವು 40 ವರ್ಷಗಳಿಂದ ಮಾಧ್ಯಮ ಕ್ಷೇತ್ರದ ಆಸಕ್ತ ವೃತ್ತಿಪರರಿಗೆ ಅತ್ಯಾಧುನಿಕ ಸ್ಟುಡಿಯೋ ತಂತ್ರಜ್ಞಾನದ ಮೂಲಕ ನೂತನ ಪಠ್ಯಕ್ರಮದ ಅನುಸಾರ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಹಾಗೂ ಡಿಜಿಟಲ್ ಮಾಧ್ಯಮ, ಸಾರ್ವಜನಿಕ ಸಂಪರ್ಕ, ಜಾಹೀರಾತು, ಟೆಕ್ನಿಕಲ್ ಕಂಟೆಂಟ್ ರೈಟಿಂಗ್, ಸಿನೇಮಾ, ಧಾರಾವಾಹಿ ‌ನಿರ್ಮಾಣ ಸೇರಿದಂತೆ ವಿದ್ಯಾರ್ಥಿಯ ಆಸಕ್ತಿ ಅನುಗುಣವಾಗಿ ನುರಿತ ಹಾಗೂ ವಿಭಾಗದ ಹಳೆಯ ವೃತ್ತಿಪರ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ಕೇಂದ್ರಿತ ತರಬೇತಿ ನೀಡುತ್ತಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಸುಮಾರು 500ಕ್ಕಿಂತ ಹೆಚ್ಚು ಪತ್ರಕರ್ತರನ್ನು ರೂಪಿಸಿದ್ದು, ರಾಜ್ಯ ಮತ್ತು ದೇಶದ ಮಹಾನಗರಗಳಲ್ಲಿ ಪತ್ರಿಕೆ, ರೇಡಿಯೋ, ಟೆಲಿವಿಷನ್, ಡಿಜಿಟಲ್‌ ‌ಮಾಧ್ಯಮ, ಸಾರ್ವಜನಿಕ ಸಂಪರ್ಕ, ಜಾಹಿರಾತು ಸಿನಿಮಾ, ಮನರಂಜನಾ ಉದ್ಯಮದಲ್ಲಿ ಅತ್ಯುತ್ತಮ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೃಜನಾತ್ಮಕ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯುಳ್ಳವರಿಗೆ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಅಧ್ಯಯನ ಪ್ರಶಸ್ತವಾಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಆಕಾಂಕ್ಷಿಗಳಿಗೆ ಒಂದು ಉತ್ತಮ
ತರಬೇತಿ ಸಂಸ್ಥೆ ಆಗಿದೆ. ಪತ್ರಿಕೋದ್ಯಮ ವಿಷಯದ ಸ್ನಾತಕೋತ್ತರ ಪದವಿ ಪಡೆಯಲು ಬಯಸುವ ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಡಾ. ಸಂಜಯಕುಮಾರ ಮಾಲಗತ್ತಿ, ಮೊಬೈಲ್‌ ಸಂಖ್ಯೆ:- 94810 13993 ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ‌ಸಮೂಹ ಸಂವಹನ ಇವರನ್ನು ಸಂಪರ್ಕಿಸಬಹಿದಾಗಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!