11/12/2025
IMG-20250818-WA0016

ಬೆಳಗಾವಿ-18: ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಜಾರಿಯಾಗಬೇಕಿರೋ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ತಕ್ಷಣವೇ ರಾಜ್ಯದಲ್ಲಿ ಜಾರಿಗೆ ತರುವಂತೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ, ಮುಖ್ಯಮಂತ್ರಿಗೆ ಮನವಿ ರವಾನಿಸಿದ್ದಾರೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣನವಾಗಿ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರಿಂ ಕೋರ್ಟಗ ಆದೇಶ ನೀಡಿದೆ. ಆದರೆ ರಾಜ್ಯ ಸರ್ಕಾರ ತೀರ್ಪು ಜಾರಿಗೊಳಿಸಲು ಅನಗತ್ಯ ವಿಂಳಬ ಮಾಡತ್ತಿದ್ದು, ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಸ್ತರು, ಕಾರ್ಮಿಕರು, ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಈ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಉದಯ ರೆಡ್ಡಿ, ಮಿಲಿಂದ ಐಹೊಳೆ, ಶ್ರೀಕಾಂತ ಮಾದರ, ಪರಶರಾಮ ವಂಟಮುರಿ, ಬಸವರಾಜ ದೊಡ್ಡಮನಿ, ಯಮನಪ್ಪ ರತ್ನಾಕರ, ಬಸಪ್ಪ ಮಾದರ, ವಿಷ್ಣು ಇಂಗಳಿ, ಅರವಿಂದ ಕೋಲಕಾರ, ಫಕೀರಪ್ಪ ಹರಿಜನ, ಹಾಜರಿದ್ದರು.

error: Content is protected !!