11/12/2025
IMG-20250817-WA0019

ಬೆಳಗಾವಿ-17: ಬೆಂಗಳೂರಿನ ಶ್ರೀನಗರದ ಎಸ್.ಎಸ್.ಟಿ.ಸಿ. ರಹವಾಸಿ ಸಂಘದವರು ೭೯ ನೇಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು.

ಧ್ವಜರೋಹಣವನ್ನು ಮಾಡಿದ ಕಾರ್ಯದಶಿ೯ ಎಸ್.ಬಿ ಕುಲಕರ್ಣಿ ಮಾತನಾಡುತ್ತ ರಾಷ್ಟ್ರಾಭಿಮಾನ, ರಾಷ್ಟ್ರಭಕ್ತಿಯನ್ನು ಮೂಡಿಸುವ ಕೆಲಸವು ಪ್ರತಿ ಮನೆ ಮನೆಯಿಂದ ಆರಂಭವಾಗಬೇಕು. ಮನೆಯಲ್ಲಿ ಪಾಲಕರು ಹಿರಿಯರಾದವರು ಮಕ್ಕಳಿಗೆ ದೇಶ, ಸಂಸ್ಕೃತಿ ಕುರಿತು ತಿಳುವಳಿಕೆ ಹೇಳಿ ಅದರಂತೆ ಬಾಳುವ ದಾರಿಯನ್ನು ಹೇಳಿಕೊಡಬೇಕೆಂದು ಹೇಳಿದ ಎಸ್. ಬಿ. ಅವರು ಇಂದಿನ ಕಾರ್ಯಕ್ರಮ ಯಶಸ್ಸಿಗೆ ಕಾರಣರಾದ ಜಿತೆಂದ್ರಕುಮಾರ, ಶ್ರೀಮತಿ ವಿದ್ಯಾವತಿ, ಶ್ರೀಮತಿ ಜಯಶ್ರೀ, ಶ್ರೀಮತಿ ಶೈಲಶ್ರೀ ವಡೆಯರ, ಶ್ರೀಮತಿ ಪ್ರಣತಿ ಪಾಟೀಲ, ಲಿಯಾ ಅವರಿಗೆ ಧನ್ಯವಾದಗಳನ್ನು ಹೇಳಿದರು

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಂಗೂರ ಗುರಾಚಾರ ಅವರು ಮಾತನಾಡಿ ದೇಶ ಸ್ವಾತಂತ್ರ್ಯ ಪಡೆಯಲು ಸ್ವಾತಂತ್ರ್ಯ ಯೋಧರು
ಪಟ್ಟ ಕಷ್ಟ ನೋವುಗಳನ್ನು ಹಂಚಿಕೊಂಡರು.

ಶ್ರೀಮತಿ ಗೀತಾ ದೇಶಭಕ್ತಿಗೀತೆಯನ್ಮು ವಾಚಿಸಿದರು.

ಕು. ಲೀಲಾ, ಕು. ಪ್ರಣತಿ ಪಾಟೀಲ ಮತ್ತು ಶಿವಾಂಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಶ್ರೀ. ಪುಟ್ಟನOಜಪ್ಪ ಉಪಸ್ಥಿತರಿದ್ದರು. ಶೀಮತಿ ವಿದ್ಯಾ ಸ್ವಾಗತಿಸಿದರು. ಶ್ರೀಮತಿ ಜಯಶ್ರೀ ವಂದಿಸಿದರು.

error: Content is protected !!