ಬೆಳಗಾವಿ-15:ಬೆಳಗಾವಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಪ್ರೌಢಶಾಲೆಯಲ್ಲಿ 79ನೇಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಬಿ ಪಿ ಲಮಾಣಿಯವರು ವಿಶ್ರಾಂತ ಮುಖ್ಯೋಪಾಧ್ಯಾಯರು ಧ್ವಜಾ ರೋಹಣ ನೆರವೇರಿಸಿ, ಸ್ವಾತಂತ್ರ್ಯದ ಪೂರ್ವ ಹಾಗೂ ಸ್ವಾತಂತ್ರದ ನಂತರ ಬದಲಾವಣೆಯಾದ ಭಾರತದ ಚಿತ್ರಣದ ಬಗ್ಗೆ ಮಾತನಾಡಿದರು ನಂತರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಹಾಗೂ ಛದ್ಮವೇಷದ ಪ್ರದರ್ಶಿಸಿದರು ಅದರಲ್ಲಿ ಕಿತ್ತೂರರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವೇಷಧಾರಿಗಳಿಗೆ ಬಹುಮಾನ ವಿತರಿಸಲಾಯಿತು ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವತಂತ್ರ ಯೋಧರಾದ ಶ್ರೀ ಗವಿಸಿದ್ದಪ್ಪ ಬೆಳವಡಿಯವರ ಮೂರ್ತಿಗೆ ಪೂಜೆಯನ್ನು ಸಲ್ಲಿಸುವ ಮುಖಾಂತರ ಎಲ್ಲಾ ಕಾರ್ಯಕ್ರಮಗಳು ಪ್ರಾರಂಭವಾದವು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಿ ಎಂ ಮಠ ಸಂಸ್ಥೆಯ ಚೇರ್ಮನರಾದ ಶ್ರೀ ಆರ್ ಪಿ ಪಮ್ಮಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಿ ಎಂ ಸುಣಗಾರ್ ಸರ್ ಹಾಗೂ ಭೋದಕ ಬೋಧ ಕೇತರ ಸಿಬ್ಬಂದಿ ವರ್ಗದವರು ಪ್ರೌಢಶಾಲೆಯ ಬೋಧಕ ಬೋಧಕೆತರ ಸಿಬ್ಬಂದಿದವರು ಶಾಲೆಯ ಮುದ್ದು ಮಕ್ಕಳು ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.
