12/12/2025
IMG-20250811-WA0017

ಬೆಂಗಳೂರು(ಬೆಳಗಾವಿ)-11: ಗೌರವಾನ್ವಿತ ಪ್ರಧಾನಮಂತ್ರಿಗಳಾದ  ನರೇಂದ್ರ ಮೋದಿ ಅವರಿಂದ ಚಾಲನೆ ಪಡೆದು ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಬೆಂಗಳೂರು – ಬೆಳಗಾವಿ ವಂದೇ ಭಾರತ್ ರೈಲನ್ನು ಬೆಳಗಾವಿಯ ರೈಲು ನಿಲ್ದಾಣದಲ್ಲಿ ಸ್ವಾಗತಿಸಿಕೊಂಡು, ಮಾತನಾಡಲಾಯಿತು.

ನಮ್ಮ ಬೆಳಗಾವಿ ಜನತೆಯ ಬಹು ದಿನಗಳ ಕನಸು ಇಂದು ನನಸಾಗಿದೆ, ಬೆಂಗಳೂರಿನಿಂದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಸಂಚಾರ ಆರಂಭಿಸಿದ್ದು, ಬೆಳಗಾವಿ ಜನತೆಗೆ ಅತ್ಯಂತ ಉಪಯುಕ್ತವಾಗಿದೆ. ನಮ್ಮ ಮನವಿಗೆ ಸ್ಪಂದಿಸಿ, ಬೆಳಗಾವಿ – ಬೆಂಗಳೂರು ನಡುವೆ ವಂದೇ ಭಾರತ್ ರೈಲನ್ನು ಆರಂಭಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿಗಳಾದ  ನರೇಂದ್ರ ಮೋದಿಯವರಿಗೆ, ಕೇಂದ್ರ ರೈಲ್ವೆ ಸಚಿವರಾದ  ಅಶ್ವಿನಿ ವೈಷ್ಣವ ಅವರಿಗೆ, ರೈಲ್ವೆ ರಾಜ್ಯ ಖಾತೆ ಸಚಿವರಾದ  ವಿ. ಸೋಮಣ್ಣ ಅವರಿಗೆ ಬೆಂಗಳೂರು ನಲ್ಲಿ ಉಪಸ್ಥಿತರಿದ್ದರು.

Screenshot 2025 0805 191900 - Screenshot 2025 0805 191900

IMG 20250811 WA0021 - IMG 20250811 WA0021
: *ಬೆಳಗಾವಿಗೆ ಆಗಮಿಸಿದ ವಂದೇ ಭಾರತ್ ರೈಲು!*
ಅದ್ಧೂರಿಯಾಗಿ ಸ್ವಾಗತಕೋರಿದ ಬೆಳಗಾವಿ ಜನ
ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅದ್ಧೂರಿ ಸ್ವಾಗತ
ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿ ಸಂಭ್ರಮ
ಬೆಂಗಳೂರಿನಲ್ಲಿ ಬೆಳಿಗ್ಗೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಬೆಳಗಾವಿ ನಗರದಲ್ಲಿ  ವಂದೇ ಭಾರತ್ ರೈಲಿಗೆ  ಬರಮಾಡಿಗೊಂಡ ಯಲ್ಲಿ ಸಂಸದ ಜಗದೀಶ್ ಶೆಟ್ಟರ,ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರದ ಮಹಾಪೌರರಾದ  ಮಂಗೇಶ ಪವಾರ, ಉಪಮಹಾಪೌರರಾದ ವಾಣಿ ಜೋಶಿ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಮಾಜಿ ಸಂಸದರಾದ  ಮಂಗಲಾ ಅಂಗಡಿ, ಶಾಸಕರಾದ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ ದೊಡ್ಡಗೌಡರ, ಬಿಜೆಪಿ ಜಿಲ್ಲಾಧ್ಯಕ್ಷರಾದ  ಸುಭಾಷ ಪಾಟೀಲ, ಬೆಳಗಾವಿ ನಗರ ಬಿಜೆಪಿ ಅಧ್ಯಕ್ಷರಾದ ಗೀತಾ ಸುತಾರ, ನಗರ ಸೇವಕರಾದ ಹನುಮಂತ ಕೊಂಗಾಲಿ, ರೈಲ್ವೆ ಇಲಾಖೆಯ ADRM  ವಿಷ್ಣು ಭೂಷಣ್, ಪ್ರಮುಖರಾದ ಡಾ. ರವಿ ಪಾಟೀಲ, ಶ್ರೀ ಪ್ರಸಾದ ಕುಲಕರ್ಣಿ, ಎಫ್. ಎಸ್ ಸಿದ್ದನಗೌಡರ್, ನಗರ ಸೇವಕರು, ಪಕ್ಷದ ಕಾರ್ಯಕರ್ತರು, ಬೆಳಗಾವಿ ನಗರದ ಪ್ರಮುಖರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

error: Content is protected !!