ಕೌಜಲಗಿ-07 : ಪಟ್ಟಣದ ಭೋವಿ ಓಣಿಯಲ್ಲಿರುವ ಬ್ರಹ್ಮದೇವರ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮವು ಗುರುವಾರ ಸಡಗರ ಸಂಭ್ರಮದಿಂದ ಜರುಗಿತು.
ಬ್ರಹ್ಮ ದೇವರ ನೂತನ ಮೂರ್ತಿಯನ್ನು ಪಟ್ಟಣದ ಬಲ ಭೀಮ ದೇವಸ್ಥಾನದಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್, ಬಸವೇಶ್ವರ ಪೇಟೆ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಮಹಿಳೆಯರ ಭವ್ಯ ಕುಂಭಮೇಳ, ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯ ಮೂಲಕ ಕರೆತಂದು, ಮಹಾಭಿಷೇಕ ಧಾರ್ಮಿಕ ಕಾರ್ಯಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ಬ್ರಹ್ಮದೇವರ ಮೂರ್ತಿ ಪ್ರತಿಷ್ಠಾಪನೆಯ ನಿಮಿತ್ತ ದೇವಸ್ಥಾನದ ಸಮಿತಿ ವತಿಯಿಂದ ಸ್ಥಳೀಯ ಮರಳ ಸಿದ್ದೇಶ್ವರ ಸಿದ್ಧ ಸಂಸ್ಥಾನ ಮಠದ ಕೃಪಾನಂದ ಮಹಾಸ್ವಾಮೀಜಿ, ವಿಠಲ ಬೀರದೇವರ ದೇವಸ್ಥಾನದ ದೇವರ್ಷಿ ವಿಠ್ಠಲ ಕುರುಗುಂದ ಅಜ್ಜನವರನ್ನು ಹಾಗೂ ಸ್ಥಳೀಯ ದಾನಿಗಳನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಗೋಕಾಕ ಪ್ರಭಾ ಶುಗರ್ಸ ನ ನಿರ್ದೇಶಕ ಎಂ ಆರ್ ಭೋವಿ, ಎಸ್ ಆರ್ ಭೋವಿ, ರವೀಂದ್ರ ಪರುಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ವೆಂಕಟೇಶ ದಳವಾಯಿ, ಸುಭಾಷ್ ಕೌಜಲಗಿ, ಕೇಶವ ಭೋವಿ, ರಾಮಣ್ಣ ಈಟಿ, ಪಕೀರಪ್ಪ ಪೂಜನ್ನವರ ಸೇರಿದಂತೆ ಪಟ್ಟಣದ ಮುಖಂಡರು, ಯುವಕರು, ಮಹಿಳೆಯರು ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.
