ಖಾನಾಪುರ-06: ಖಾನಾಪುರ ನಗರದ ಸಮಾದೇವಿ ಗಲ್ಲಿಯ ನಿವಾಸಿ ಹಾಗೂ ಹಿರಿಯ ಗುತ್ತಿಗೆದಾರರು ಆಗಿದ್ದ ಗುರುಸಿದ್ದಪ್ಪ ಸಿದ್ದಪ್ಪ ಹೆಬ್ಬಾಳಕರ (ವಯ 95) ಅವರು ಬುಧವಾರ ಬೆಳಿಗ್ಗೆ 10 ಗಂಟೆಗೆ ವೃದ್ಧಾಪ್ಯದಿಂದ ನಿಧನರಾಗಿದ್ದಾರೆ.
ಗುರುಸಿದ್ದಪ್ಪ ಹೆಬ್ಬಾಳಕರ ಅವರು ಸಾಮಾಜಿಕ ಕಾರ್ಯಕರ್ತ ರವೀಂದ್ರ ಹೆಬ್ಬಾಳಕರ ಅವರ ತಂದೆ ಹಾಗೂ ಪ್ರಸ್ತುತ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಲಕ್ಷ್ಮೀ ಹೆಬ್ಬಾಳಕರ ಅವರ ಮಾವ.
ಅಂತ್ಯಕ್ರಿಯೆ ಬುಧವಾರ ಸಂಜೆ ಖಾನಾಪುರದ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್ ನಿಲ್ದಾಣದ ಹಿಂದಿನ ಲಿಂಗಾಯತ ರುದ್ರಭೂಮಿಯಲ್ಲಿ ನಡೆಯಿತು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
