12/12/2025
IMG-20250806-WA0034

ಬೆಳಗಾವಿ-06:ಅಸಂಬದ್ಧ ಹೇಳಿಕೆಗಳ ಮೂಲಕ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿರುವ ರಾಹುಲ ಗಾಂಧಿಯವರು ಲೊಕಸಭೆಯ ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದು ತಕ್ಕಷಣ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಮಾಜಿ ಶಾಸಕ ಸಂಜಯ ಪಾಟೀಲ ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಕಾನೂನು ರಚನೆ ಮಾಡುವ ಸಂಸತ್ತಿನ ಲೊಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತು ಹುಡಗಾಟಿಕೆ ಹೇಳಿಕೆ ನೀಡಿ ಭಾರತಾಂಬೆಯ ಸೇವೆಗಾಗಿ ತಮ್ಮ ಜೀವವನ್ನೆ ಮುಡಪಾಗಿಟ್ಟಿರುವ ಸೈನಿಕರ ಬಗ್ಗೆ ಹಗರುವಾಗಿ ಮಾತನಾಡಿ, ಭಾರತ ದೇಶದಲ್ಲಿದ್ದು ಚೀನಾ ದೇಶದ ಪರ ಮಾತನಾಡುವ ಇವರ ನಡುವಳಿಕೆಗೆ ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕುವದರ ಜೋತೆಗೆ ನೀವು ನೈಜ ಭಾರತೀಯರಾಗಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಛಾಟಿ ಬಿಸುವ ಮೂಲಕ ಅವರ ಮನಸ್ಥಿತಿಯನ್ನು ನ್ಯಾಯಲಯವೆ ಹೇಳಿದೆ.
ಆದ್ದರಿಂದ ರಾಹುಲಗಾಂಧಿಯವರು ಲೊಕಸಭೆಯ ವಿರೊಧಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದ ಗೌರಬ ಕಾಪಾಡಬೆಕೆಂದು ಆಗ್ರಹಿಸಿದರು.

error: Content is protected !!