ಬೆಳಗಾವಿ-02: ಆರ್‌ಎಂಆರ್ (RMR) ಸ್ಪೋರ್ಟ್ಸ್ ಅಕಾಡೆಮಿಯೂ ಒಂದೇ ಸೂರಿನಡಿಯಲ್ಲಿ ವಿವಿಧ ಕ್ರೀಡಾ ತರಬೇತಿಯ ಆರಂಭಿಸಿರುವುದು ಸಂತಸವಾಗಿದೆ. ಮಕ್ಕಳು ಈ ಅಕಾಡೆಮಿಯಲ್ಲಿ ತರಬೇತಿ ಪಡೆದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ದೇಹದಾರ್ಢ್ಯ ಮಿಸ್ಟರ್ ವರ್ಲ್ಡ್ ರಾಕೇಶ ವಾದವಾ ಅವರು ಹೇಳಿದರು.
ನಗರದ ಆರ್‌ಪಿಡಿ ವೃತ್ತದ ಬಳಿಯ ಸರಾಪ್ ಕಾಲೋನಿಯಲ್ಲಿನ ಕ್ರೀಡಾ ತರಬೇತಿ ಕೇಂದ್ರವಾದ ʻಆರ್‌ಎಂಆರ್ (RMR ) ಸ್ಪೋರ್ಟ್ಸ್ ಅಕಾಡೆಮಿʼ ಯಿಂದ ಹಾಗೂ ಅಮೊದ್‌ರಾಜ್ ಸ್ಪೋರ್ಟ್ಸ್ ಸಹಯೋಗದಲ್ಲಿ ನಡೆದ ಬ್ಯಾಡ್ಮಿಂಟನ್ ಓಪನ್ ರೇಸ್ ಟೂರ್ನಮೆಂಟ್ ಪಂದ್ಯಾವಳಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕ–ಯುವತಿಯರು ಸಾಹಸ ಕ್ರೀಡೆಯಲ್ಲಿ ನುರಿತಾದ ಮಾತ್ರ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡರಾಗಲು ಸಾಧ್ಯ. ಪೋಷಕರು ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಮತ್ತು ಸ್ಪರ್ಧಾ ಮನೋಭಾವನೆ ಬೆಳೆಸಬೇಕು. ಯುವಕರಿಗೆ ಸಾಹಸಮಯ, ಆತ್ಮವಿಶ್ವಾಸ ಬೆಳೆಸುವ ಅಕಾಡೆಮಿಗಳಿರಬೇಕು ಎಂದರು.
ಯುವಕ–ಯುವತಿಯರು ತಮ್ಮ ಜೀವನ ಗುರಿಯನ್ನು ಮುಟ್ಟಲು ಒಳ್ಳೆಯ ಅವಕಾಶ ಸಿಕ್ಕಿದೆ. ಇಂತಹ ಆರ್‌ಎಂಆರ್ (RMR) ಬೃಹತ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಆತ್ಮಸ್ಥೈರ್ಯ ಬೆಳೆಸಿಕೊಂಡು, ಪೋಷಕರ ಕನಸನ್ನು ಈಡೇರಿಸಬೇಕು ಎಂದು ಸಲಹೆ ನೀಡಿದರು.
ಬೆಳಗಾವಿಯಲ್ಲಿ RMR ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾ ತರಬೇತಿಯ ಕೇಂದ್ರವಾಗಿರುವುದು ಹೆಮ್ಮೆಯ ವಿಷಯ ಎಂದು ಇಂಗಿತ ವ್ಯಕ್ತಪಡಿಸಿದರು.
ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಫಿಟ್‌ನೆಸ್, ಕ್ರಾಸ್ ಫಿಟ್, ಯೋಗ ಮತ್ತು ಫಿಸಿಯೋಥೆರಪಿ ಮತ್ತು ಸೇರಿದಂತೆ ವಿವಿಧ ಕ್ರೀಡೆಗಳಿಗೆ ತರಬೇತಿ ನೀಡುತ್ತಿರುವುದು ಬೆಳಗಾವಿ ಯುವಕರ ಬದುಕಿಗೆ ಆಸರೆಯಾಗಲಿದೆ. ಈ ಕ್ರೀಡಾ ತರಬೇತಿಯನ್ನು ಪಡೆಯಲು ಮಕ್ಕಳಿಗೆ ಪೌಷ್ಟಿಕಾಂಶ ತುಂಬಾನೆ ಮುಖ್ಯವಾಗಿದೆ. ಈ ಕ್ರೀಡಾ ತರಬೇತಿಯಲ್ಲಿ ಪೌಷ್ಟಿಕಾಂಶದ ತರಬೇತಿ ಇರುವುದು ಮಕ್ಕಳಿಗೆ ಬಹಳಷ್ಟು ಅನುಕೂವಾಗಲಿದೆ ಎಂದು ಹೇಳಿದರು.
ಆರ್‌ಎಂಆರ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, Iron-Roots ಎಂಬ ಹೆಸರೇ ಮಕ್ಕಳನ್ನು ಇನ್ನಷ್ಟೂ ಸದೃಢಗೊಳಿಸಲಿದೆ. ಈ ಅಕಾಡೆಮಿಯ ತರಬೇತಿಯಲ್ಲಿ ನುರಿತ ಮಕ್ಕಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಿಂಚಲಿ, ಬೆಳಗಾವಿಯ ಕೀರ್ತಿ ಹೆಚ್ಚಿಸುವ ಆರ್‌ಎಂಆರ್ ಸ್ಪೋರ್ಟ್ಸ್ ಅಕಾಡೆಮಿ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
ಆರ್‌ಎಂಆರ್ ಅಕಾಡೆಮಿಯ ಸಂಸ್ಥಾಪಕರಾದ ಮೋಹನ್ ರಾಯ್ಕರ್ ಅವರು ಮಾತನಾಡಿ, ಸ್ಪರ್ಧಾಳುಗಳಿಗೆ ಶಿಸ್ತು, ಶ್ರದ್ಧೆ ಮುಖ್ಯವಾಗಿದೆ. ನಾವು ಯಶಸ್ಸು ಸಾಧಿಸಲು ಪ್ರಯತ್ನ ನಿರಂತರವಾಗಿರಬೇಕು. ಇದು ಅಕಾಡೆಮಿಯ ತಂತ್ರಜ್ಞಾನ , ಶಕ್ತಿ ಕೇಂದ್ರವಾಗಿದೆ. 6 ರಿಂದ 10 ವರ್ಷದ ಮಕ್ಕಳಿಗೆ ವಿವಿಧ ಕ್ರೀಡೆ ತರಬೇತಿ, ಯೋಗ ಮತ್ತು ಕ್ರೀಡಾ ಭವಿಷ್ಯಕ್ಕೆ ಈ ಮೂಲಕ ಅನುಕೂಲವಾಗಲಿದೆ. ಈ ಅಕಾಡೆಮಿಯಲ್ಲಿ ತರಬೇತಿ ಪಡೆದ ಮಕ್ಕಳು ಅಥ್ಲೆಟಿಕ್ಸ್ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ವಿಭಾಗದ ಮುಖ್ಯ ತರಬೇತಿದಾರ ಭೂಷಣ ಅನ್ನೇಕರ್, ಟೇಬಲ್ ಟೆನಿಸ್ ವಿಭಾಗದ ಮುಖ್ಯಸ್ಥರಾದ ಸಿದ್ದಾರ್ಥ್ ಪುಟಾಣೆ, ರಾಜಾರಾಮ ರಾಯ್ಕರ್ , ಕುನಾಲ್ ರಾಯ್ಕರ್, ಶೈಲಜಾ ಭಿಂಗೆ ಹಾಗೂ ಇತರರು ಉಪಸ್ಥಿತರಿದ್ದರು.
