16/07/2026
IMG-20260715-WA0000

ಬೈಲಹೊಂಗಲ-15: ವಿಧಾನಸಭಾ ಕ್ಷೇತ್ರ ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ಜೂನ್ 30 ರಿಂದ ಜುಲೈ 29 ರವರೆಗೆ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯ ಸರ್ಕಾರದ ‌ಧೊರಣೆಯಿಂದ ಸಂಪೂರ್ಣ ಆಡಳಿತಾತ್ಮಕ ಗೊಂದಲ ಹಾಗೂ ವೈಫಲ್ಯದ ಪರಮಾವಧಿಯಾಗಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದ್ದಾರೆ.
ಸೋಮವಾರ ಮಾಧ್ಯಮ ಪ್ರಕಟಣೆ ‌ಮೂಲಕ ತಿಳಿಸಿದ ಅವರು, ಭಾರತೀಯ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಮನೆ-ಮನೆ ಭೇಟಿಯ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ರಾಜ್ಯದ ವಿವಿಧ ಭಾಗಗಳಲ್ಲಿ ಕಲ್ಯಾಣ ಮಂಟಪಗಳು, ಮಸೀದಿಗಳ ಹತ್ತಿರ ಹಾಗೂ ಖಾಸಗಿ ಕಚೇರಿಗಳಂತಹ ಕೇಂದ್ರೀಕೃತ ಸ್ಥಳಗಳಲ್ಲಿ ಕ್ಯಾಂಪ್ ಮಾದರಿಯಲ್ಲಿ ಅಕ್ರಮವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಅಧಿಕಾರಿಗಳಿಗೆ ಸೂಕ್ತ ತಾಂತ್ರಿಕ ಮಾರ್ಗದರ್ಶನವಿಲ್ಲದ ಕಾರಣ ಇಡೀ ದತ್ತಾಂಶದಲ್ಲಿ ಕೌಟುಂಬಿಕ ಲಿಂಕ್ ಪ್ರಕ್ರಿಯೆ ಮತ್ತು ಪ್ರೊಜೆನಿ ಮ್ಯಾಪಿಂಗ್ ವೈಪರೀತ್ಯಗಳು
ಉಂಟಾಗುತ್ತಿರುವುದಲ್ಲದೆ, ಬೇರೆ ಬೇರೆ ಬಿಎಲ್‌ಒಗಳು ಫಾರಂ ತುಂಬಲು ಸಾರ್ವಜನಿಕರಿಗೆ ಕೌಟುಂಬಿಕ ಸಂಬಂಧಗಳ ಕಾಲಂ ಬಗ್ಗೆ ಪರಸ್ಪರ ಗೊಂದಲಕಾರಿ ಹಾಗೂ ವಿಭಿನ್ನ ಸೂಚನೆಗಳನ್ನು ನೀಡುತ್ತಿದ್ದಾರೆ; ಇದಲ್ಲದೆ, ಬಿಎಲ್‌ಒ ಜವಾಬ್ದಾರಿಯನ್ನು ಹೊತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಈ ಕೆಲಸವನ್ನು ನಿರ್ವಹಿಸುವುದು ತಮಗೆ ಅಸಾಧ್ಯವೆಂದು ಜಿಲ್ಲಾಡಳಿತಕ್ಕೆ ಬಿಡುಗಡೆಗಾಗಿ ವಿನಂತಿಸುತ್ತಿದ್ದಾರೆ, ಏಕೆಂದರೆ ಅನೇಕ ಪ್ರಕರಣಗಳಲ್ಲಿ ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡುವ ಮುನ್ನವೇ ಫಾರಂಗಳನ್ನು ಸ್ಕ್ಯಾನ್ ಮಾಡಿದ್ದು, ಅದರಲ್ಲಿ. 90 ರಿಂದ 100 ರಷ್ಟು ದಾಖಲೆಗಳು ಈಗಾಗಲೇ ಗೊಂದಲಮಯವಾಗಿ/ದೋಷಪೂರಿತವಾಗಿ ಕಾಣಿಸುತ್ತಿವೆ. ಗಂಭೀರವಾದ ಆಡಳಿತಾತ್ಮಕ ಲೋಪದೋಷಗಳಿಗೆ ಹೊಣೆ ಯಾರು? ಕೇವಲ ತಳಮಟ್ಟದ ಬಿಎಲ್‌ಒಗಳೋ ಅಥವಾ ಸರಿಯಾದ ವ್ಯವಸ್ಥೆ ಮತ್ತು ತರಬೇತಿ ಕಲ್ಪಿಸದ ಜಿಲ್ಲಾಡಳಿತವೋ? ಈ ದ್ವಂದ್ವವನ್ನು ನಿವಾರಿಸಲು ಜಿಲ್ಲಾಡಳಿತವು ಪ್ರತಿಯೊಂದು ಬೂತ್‌ನಲ್ಲಿ ಬಿಎಲ್‌ಒ ಜೊತೆಗೆ ಒಬ್ಬ ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯನ್ನು ಮೇಲ್ವಿಚಾರಣೆಗೆ ನೇಮಿಸಬೇಕು. ಮತದಾರರ ಜಾಗೃತಿಯನ್ನು ತೀವ್ರಗೊಳಿಸಲು ದಿನನಿತ್ಯ ಧ್ವನಿವರ್ಧಕಗಳಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು.ಅಕ್ಟೋಬರ್ 1, 2026 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ 18 ವರ್ಷ ತುಂಬುವ ಹೊಸ ಮತದಾರರು ಈಗಲೇ ಫಾರಂ 6 (Form 6) ಸಲ್ಲಿಸುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಯುವ ಮತದಾರರನ್ನು ನೋಂದಾಯಿಸಲು ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು ಮತ್ತು ತಕ್ಷಣವೇ ಯಥೇಚ್ಛವಾಗಿ ಫಾರಂಗಳನ್ನು ಪೂರೈಸಬೇಕು, ಎಂದು ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ನಡೆಯುತ್ತಿರುವ ಈ ಮಹತ್ವದ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸುಳ್ಳು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ನೇತೃತ್ವದ ಕಾಂಗ್ರೆಸ್ ಸರ್ಕಾರ, ತನ್ನ ಆಡಳಿತ ಯಂತ್ರದ ಮೂಲಕ ತೆರೆಯ ಮರೆಯಲ್ಲಿ ಮತದಾರರ ಪಟ್ಟಿ ದುರುಪಯೋಗಪಡಿಸಿಕೊಳ್ಳಲು ವಿಪರೀತವಾಗಿ ಕೈ ಆಡಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಕೆಲ ಕಾಂಗ್ರೆಸ್ ಶಾಸಕರು ಸುಳ್ಳು ಮಾಹಿತಿಯ ಕರ ಪತ್ರ ಹಂಚುವ ಮೂಲಕ‌ ಮತದಾರ ಪಟ್ಟಿಯಲ್ಲಿ‌ ಹೆಸರನ್ನು ಕಾಂಗ್ರೇಸ್ ಕೊಡುತ್ತಿದೆ ಬಿಜೆಪಿ ಕಿತ್ತುಕೊಳ್ಳುತ್ತಿದೆ ಎಂಬ ಬಿತ್ತಿ ಪತ್ರ ಹಂಚುವ ಮೂಲಕ ಕಾಂಗ್ರೆಸ್ ತನ್ನ ಅಪ್ರಬುದ್ದತೆ ಪ್ರದರ್ಶಿಸುತ್ತಿದೆ. ಆಡಳಿತ ಪಕ್ಷವು ಇಡೀ ಕರ್ನಾಟಕದಾದ್ಯಂತ ಮತದಾರರ ನೋಂದಣಿ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿದೆ. ಮೃತರಾದ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕದಂತೆ ಅಧಿಕಾರಿಗಳು ಆಡಳಿತ ಮಂಡಳಿಯಿಂದ ಮೌಖಿಕ ಆದೇಶ ಪಡೆದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಅಲ್ಲದೆ ದೂರದ ಸಂಬಂಧಿಕರನ್ನು ಹತ್ತಿರದ ಕುಟುಂಬದವರೆಂದು ತೋರಿಸಿ ಅಕ್ರಮವಾಗಿ ಹೆಸರು ಸೇರಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಪಾವಿತ್ರ್ಯತೆಯ ಮೇಲಿನ ನೇರ ದಾಳಿಯಾಗಿದೆ. ಈ ದಾರಿತಪ್ಪಿಸುವ ಹಾಗೂ ಪಕ್ಷಪಾತದ ಪ್ರಕ್ರಿಯೆಯನ್ನು ತಡೆಯಲು ಭಾರತೀಯ ಚುನಾವಣಾ ಆಯೋಗವು ತಕ್ಷಣವೇ ಕರ್ನಾಟಕಕ್ಕೆ ವಿಶೇಷ ವೀಕ್ಷಕರನ್ನು ನೇಮಿಸಿ, ಇಡೀ ಪ್ರಕ್ರಿಯೆಯು ಸಂಪೂರ್ಣವಾಗಿ ತಟಸ್ಥವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು,” ಎಂದ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!