25/05/2026
IMG-20260524-WA0009

“ನಾವು ಭೂಮಿಗೆ ಬಂದ ಅತಿಥಿಗಳು”

ಮೃತ್ಯುಂಜಯ ಅಪ್ಪಗಳು ಹಿರೇಮಠ ಅವರು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವಾರದ ಸತ್ಸಂಗದಲ್ಲಿ ತಮ್ಮ ಆಶೀರ್ವಚನದಲ್ಲಿ “ನಾವು ಭೂಮಿಗೆ ಬಂದ ಅತಿಥಿಗಳು “ನಾವು ಈ ಭೂಮಿಗೆ ಒಂದಿಷ್ಟು ದಿನಗಳ ಕಾಲ ಇದ್ದು ಹೋಗಲು ಬಂದಿದ್ದೆವೆ ಪ್ರಕೃತಿಯ ಕೊಡುಗೆಗಳನ್ನು ಅನುಭವಿಸಿ ಎಲ್ಲರನ್ನೂ ಪ್ರೀತಿ ಆದರದಿಂದ ಸತ್ಕರಿಸಿ ಕೃತಜ್ಞತೆ ಭಾವದಿಂದ ಮರಳಿ ಹೋಗಬೇಕು ಆದರೆ ಮನುಷ್ಯ ಧರೆ ಧನ, ವನಿತೆಯರ ಮಾಯೆ ಮುಸುಕಿ ನಿಜವಾದ ಆನಂದ ಪಡೆಯದೆ ದುಃಖಿಯಾಗುತ್ತಿದ್ದಾನೆ ಶರಣರು ಸಂಸಾರದಲ್ಲಿ ಇದ್ದು ಇಲ್ಲದಂತೆ ಬದುಕಿ ತಮ್ಮ ಅನುಭಾವದ ಸಾರವನ್ನು ವಚನಗಳಲ್ಲಿ ಹಿಡಿದಿಟ್ಟು ಕೊಟ್ಟಿದ್ದಾರೆ ಅಂತಹ ವಚನಗಳನ್ನು ಓದಿ ಅರ್ಥೈಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಒಂದಿಷ್ಟಾದರು ಸಂತೃಪ್ತಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ನಾವು ಪ್ರಾಪಂಚಿಕ ಮನೆಯನ್ನು ಕಟ್ಟಿ ಬಿಟ್ಟು ಹೋಗುತ್ತೆ ಆದರೆ. ಶರಣರು ಅಲೌಕಿಕ ಅಂತರಂಗದ ಅನುಭಾದ ಮನೆಯನ್ನು ಕಟ್ಟಿ ಭೂಮಿಯ ಮೇಲೆ ನೆಲೆ ನಿಂತರು ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು

IMG 20260524 WA0008 - IMG 20260524 WA0008

ಚನ್ನಬಸವಣ್ಣನವರ ಗುಬ್ಬಿ ಹೆರದ ಮನೆಯ ತನ್ನ ಮನೆ ಎಂಬಂತೆ ವಚನ ವಿಶ್ಲೇಷಣೆ ಮಾಡುತ್ತಾ ಮನುಷ್ಯರು ಭೂಮಿಗೆ ಬಂದ ಬಾಡಿಗೆದಾರರು ಒಂದಿಷ್ಟು ದಿನಗಳ ಕಾಲ ಇದ್ದು ಹೋಗುವರು ಪ್ರತಿಯೊಬ್ಬ ವ್ಯಕ್ತಿ ಗೆ ತನ್ನೆದೇ ಆದ ಜವಾಬ್ದಾರಿಗಳೆ ಕರ್ತವ್ಯಗಳಿವೆ ಅವುಗಳನ್ನು ಪೂರೆಸಬೇಕಾಗಿದೆ ದೇವರು ಸಕಲ ಸೌಲಭ್ಯಗಳನ್ನು ಕೊಟ್ಟು ಸೃಷ್ಟಿಯನ್ನು ಸೃಷ್ಟಿಸಿ ಬದುಕಲು ಬಿಟ್ಟರೆ ಮನುಷ್ಯ ಇದೆಲ್ಲವೂ ತನ್ನದೇ ಎಂಬ ಭ್ರಮೆಯಲ್ಲಿ ತನ್ನ ಮೂಲ ಗುರಿಯನ್ನೇ ಮರೆಯುತ್ತಿದ್ದಾನೆ ನನ್ನ ಮನೆ ನನ್ನ ಹೊಲ ನನ್ನ ಅಧಿಕಾರವೆಂದು ಬಡದಾಡುತ್ತ ದುಃಖ್ಖಿಯಾಗುತ್ತಿದ್ದಾನೆ, ಬದುಕಿರವವರೆಗೆ ಸೌಲಭ್ಯಗಳ ಬೇಕು ಆದರೆ ಅದಕ್ಕೆ ಅಂಟಿಕೊಳ್ಳದೆ ಅದರ ಸದ್ಬಳಕೆ ಮಾಡಿಕೊಂಡು ಶರಣರಂತೆ ಮಾಡಿಯು ಮಾಡದಂತೆ ಇದ್ದು ಇಲ್ಲದಂತೆ ಇರಬೇಕು ಸದಾ ಮನದಲ್ಲಿ ಜಾಗೃತಿ ವಹಿಸಿ ಇದೆಲ್ಲವೂ ಭಗವಂತನ ಕೃಪೆ ಎಂದು ಅರಿತಿರಬೇಕು ಸರ್ವ ಕೃತು ಕೂಡಲ ಚೆನ್ನಸಂಗಯ್ಯ ಎಂದು ಅರಿತಿರಬೇಕು ಎಂದು ಚನ್ನಬಸವಣ್ಣನವರ ವಚನ ವಿಶ್ಲೇಷಣದಲ್ಲಿ ಸುನಿತಾ ನಂದೆಣ್ಣವರ ಹೇಳಿದರು.

ವಚನ ಪ್ರಾರ್ಥನೆ ಶೈಲೇಜಾ ಮುನವಳ್ಳಿ ಮತ್ತು ಶೋಭಾ ಶಿವಳ್ಳಿಯವರು ನಡೆಸಿ ಕೊಟ್ಟರು ವಚನ ಗಾಯನ ಶೋಭಾ ಶಿವಳ್ಳಿಯವರಿಂದ ಹಾಗೂ ನಿರೂಪಣೆ ಮೇಘಾ ಪಾಟಿಲ ಇವರಿಂದ ಅಧ್ಯಕ್ಷರಾದ ಎಸ್ ಜಿ ಸಿದ್ನಾಳರು ಮತ್ತು ಕಾರ್ಯದರ್ಶಿ ಶಂಕರ ಶೆಟ್ಟಿ ಹಾಗೂ ಸಂಘದ ಶರಣ ಶರಣೆಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!